ಯುರೋಪಿನ ಮಾರ್ಗಗಳನ್ನು ಹೆಚ್ಚು ಪ್ರಭಾವಿಸಿದ ವಸ್ತುಗಳು.
ಮಸಾಲೆಗಳು - ವಿಶೇಷವಾಗಿ ಕಾಳು
ಮೆಣಸು, ಲವಂಗ, ಜಾ ಕಾಯಿ, ದಾಲ್ಚಿನ್ನಿ, ಶುಂಠಿ, ರೇಷ್ಮೆ, ಚೀನಾ ಮಣ್ಣು, ಅಮೂಲ್ಯ ಕಲ್ಲುಗಳು ಮುಂತಾದವುಗಳು...
ಯುರೋಪಿಯನ್ನರು ಈ ಎಲ್ಲಾ ಅಮೂಲ್ಯ ವಸ್ತುಗಳನ್ನು ಕೊಂಡುಕೊಳ್ಳಲು ಭಾರತಕ್ಕೆ ಬರಲಾರಂಭಿಸಿದರು. ಇದಕ್ಕಾಗಿ ಇವರು 02 ಮಾರ್ಗಗಳನ್ನು ಆಯ್ಕೆ ಮಾಡಿಕೊಂಡರು.
01 ಮಾರ್ಗ - ಮೆಡಿಟೇರಿಯನ್ ಸಮುದ್ರ - ಇರಾಕ್ - ಇರಾನ್ - ಆಫ್ಘಾನಿಸ್ತಾನ - ಭಾರತ .
02 ಮಾರ್ಗ - ಮೆಡಿಟರಿಯನ್ ಸಮುದ್ರ - ಈಜಿಪ್ಟ್ - ಕೆಂಪು ಸಮುದ್ರ - ಅರಬ್ಬೀ ಸಮುದ್ರ - ಭಾರತ .
ಈ ಎರಡು ಮಾರ್ಗಗಳ ಮೂಲಕ ಯುರೋಪಿಯನ್ನರು ತಮ್ಮ ತೃಷೆ ಮತ್ತು ಬೊಕ್ಕಸಗಳನ್ನು ತುಂಬಿಸಿಕೊಳ್ಳುತ್ತಿದ್ದರು.
ಇವರ ಎಲ್ಲಾ ವಸ್ತುಗಳು ಟರ್ಕಿಯ constinople ( ಈಗಿನ ಇಂಸ್ಥಾಂಬುಲ್) ಮೇಲೆ ಹೆಚ್ಚಿನ ವ್ಯಾಪಾರ ನಡೆಯುತ್ತಿತ್ತು. ಟರ್ಕಿಯ ಸುಲ್ತಾನರು ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಏರಿದರು. ಪೋರ್ಚುಗೀಸರಿಗೆ ವ್ಯಾಪಾರದಲ್ಲಿ ತುಂಬಾ ತೊಂದರೆ ಆಯಿತು. ದಿನಕಳೆದಂತೆ ತೆರಿಗೆ ನೀಡಲು ನಿರಾಕರಿಸಿದರು. ಸುಲ್ತಾನ ಮಹಮ್ಮದ್ - 02 ನೇತೃತ್ವದಲ್ಲಿ ಆಟೋಮನ್ ಎಂಬ ಹೊಸ ಸೈನ್ಯವನ್ನು ಸ್ಥಾಪಿಸಿದರು.
ನಂತರ ಆಟೋಮನ್ ಟರ್ಕರು ಎಂದು ಪ್ರಸಿದ್ಧಿ ಪಡೆಯಿತು. ಇದೇ ಸೈನ್ಯವು ಯುರೋಪಿಯನ್ನರು ವ್ಯಾಪಾರ ನಡೆಸುತ್ತಿದ್ದ ಎರಡು ಮಾರ್ಗಗಳನ್ನು ಕ್ರಿ.ಶಕ.1453/ಮೇ/23 ರಂದು ಎರಡು ಮಾರ್ಗಗಳನ್ನು ಮುಚ್ಚಿದ್ದರು. ಆದರೆ ಯುರೋಪಿಯನ್ನರು ಮಾಂಸಹಾರಿಗಳಾಗಿದ್ದರು .ಭಾರತದ ಸಾಂಬಾರ್ ಪದಾರ್ಥಗಳಿಗೆ ಮಾರುಹೋಗಿದ್ದರು ಮತ್ತು ಭಾರತದಲ್ಲಿ ಕ್ರೈಸ್ತ ರು ಇಲ್ಲದಿರುವುದನ್ನು ಅರಿತರು ಆದ್ದರಿಂದ ಇವರಿಗೆ ಸಮುದ್ರ ಮಾರ್ಗ ಕಂಡುಹಿಡಿಯುವುದು ಅನಿವಾರ್ಯವಾಯಿತು.
ಪೋರ್ಚುಗೀಸರು ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿಯುವ ಕಥೆ ಪ್ರಾರಂಭ :
ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿಯಲು ಎರಡು ದೇಶಗಳು ಪೈಪೋಟಿಯಲ್ಲಿದ್ದವು. ಅವು ಯಾವುವೆಂದರೆ..
೧. ಪೋರ್ಚುಗೀಸರು
೨. ಸ್ಪೇನ್
01 : ಪೋರ್ಚುಗೀಸರು..
ಇವರು ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರಲ್ಲಿ " ಪ್ರಥಮರು".
ಪೋರ್ಚುಗಲ್ ದೇಶ ಭೌಗೋಳಿಕವಾಗಿ " ವಿಶಾಲವಾದ ಕರಾವಳಿ ಪ್ರದೇಶ"ವನ್ನು ಒಳಗೊಂಡಿದೆ.
ಪೋರ್ಚುಗಲ್ ರಾಜಧಾನಿ "ಲಿಸ್ಬನ್" ಬಂದರು ನಗರ. ಇಲ್ಲಿ "ಹೆನ್ರಿ" ರಾಜ ಆಳ್ವಿಕೆ ಮಾಡುತ್ತಿದ್ದ ಮತ್ತು ನೌಕಾಯಾನಿಗಳಿಗೆ ತರಬೇತಿ ನೀಡಲು. ಲಿಸ್ಬನ್ ನಲ್ಲಿ " ನೌಕಾ ತರಬೇತಿ ಕೇಂದ್ರ" ಆರಂಭಿಸಿದ. ಹಾಗಾಗಿ ಇವನಿಗೆ " The Henry Navigator" ಎಂದು ಬಿರುದು ಬಂದಿತು.
ಕ್ರಿಸ್ತ ಶಕ 1471 ರಲ್ಲಿ " ಭೂ ಮಧ್ಯ ರೇಖೆ"ಯನ್ನು ದಾಟಿದರು.
ಕ್ರಿಸ್ತ ಶಕ 1481 ರಲ್ಲಿ " ಕಾಂಗೋ ನದಿ"ಯನ್ನು ತಲುಪಿದರು.
ಬರ್ತ್ಲೊಮಿಯಾ ಡಯಾಸ್ :
ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಮೊದಲು ಪ್ರಯತ್ನಿಸಿದವನು.
೨ ನೇ ಜಾನ್ ನೇತೃತ್ವದಲ್ಲಿ ಬಂದನು.
ಈತನು ಜಲಮಾರ್ಗ ಕಂಡುಹಿಡಿಯಲು ಹೊರಟು "ಆಫ್ರಿಕಾದ ತುತ್ತತುದಿಗೆ ಬರುತ್ತಾನೆ, ಅಲ್ಲಿ ಬಿರುಗಾಳಿಯ ಹೆಚ್ಚಾಗಿ ಬೀಸುತ್ತಿದ್ದ ಕಾರಣ ಮುಂದೆ ಸಾಗಲು ಮತ್ತೆ ಸ್ವದೇಶಕ್ಕೆ ಮರಳುತ್ತಾನೆ. ನಂತರ ಆ ಭೂ ಪ್ರದೇಶವನ್ನು "ಬಿರುಗಾಳಿಯ ಭೂ ಶಿರ" ಎಂದು ಎಂದು ಕರೆದ. ಆದರೆ ೨ ನೇ ಜಾನ್ " ಭರವಸೆಯ ಭೂ ಶಿರ" ಎಂದು ಕರೆದ.
ನಂತರ ಬಂದವರು...
ಕ್ರಿಸ್ಟೋಫರ್ ಕೊಲಂಬಸ್:
ಕ್ರಿಸ್ತ ಶಕ 1492 ರಲ್ಲಿ ಬರುವನು ಆದರೆ ಅವನ ನೌಕೆ ಬಿರುಗಾಳಿಗೆ ಸಿಲುಕಿ "ಸೌತ್ ಅಟ್ಲಾಂಟಿಕ್ ಮಹಾಸಾಗರ"ದಲ್ಲಿ ನಡುಗಡ್ಡೆಯನ್ನು ತಲುಪಿದನು.
ಈ ನಡುಗಡ್ಡೆಯನ್ನು "ಇಂಡಿಯಾ" ಎಂದು ಕರೆದ ಮತ್ತು ಅಲ್ಲಿನ ಮೂಲ ನಿವಾಸಿಗಳನ್ನು "ರೆಡಿ ಇಂಡಿಯನ್" ಎಂದು ಕರೆದ. ಆದರೆ ಇದನ್ನು ಯಾರು ಕೂಡ ನಂಬಲಿಲ್ಲ.
ಆಗ ಅಮೆರಿಗೋ ವೆಸ್ಪ್ಯುಸಿ ಎಂಬ ನಾವಿಕ ಕೊಲಂಬಸ್ ನ ಹಾದಿಯನ್ನು ಅನುಸರಿಸಿ ಹೋಗಿ ಕೊಲಂಬಸ್ ಕಂಡುಹಿಡಿದಿರುವುದು ಹೊಸ ಖಂಡ ಎಂದು ಹೇಳಿದ. ಈತನ ನೆನಪಿಗಾಗಿಯೇ ಆ ಖಂಡಕ್ಕೆ "ಅಮೆರಿಕಾ" ಎಂದು ಕರೆದರು. ಆದರೆ ಅಮೆರಿಕಾ ಖಂಡದ ನಿಜವಾದ ಅನ್ವೇಷಕ ”ಕೊಲಂಬಸ್”.
ಈ ಇಬ್ಬರಿಂದಲೂ ಭಾರತಕ್ಕೆ ಜಲಮಾರ್ಗ ಕಂಡುಹಿಡಿಯಲು ಸಾಧ್ಯ ಆಗುವುದಿಲ್ಲ. ನಂತರ ಬರುವವನೆ ವಾಸ್ಕೋಡಿಗಾಮ .




.jpeg)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ