ವಾಸ್ಕೊಡಗಮ ನ ನಂತರ ಬರುವವನೆ ಪೆಡ್ರೋ ಅಲ್ವರೇಜ್ ಕೆಬ್ರಾಲ್...
![]() |
| ಪೆಡ್ರೋ ಅಲ್ವರೇಜ್ ಕೆಬ್ರಾಲ್ |
1500 ರಲ್ಲಿ ಭಾರತಕ್ಕೆ ಬರುತ್ತಾನೆ
ಕಾರ್ಟನ್ (ತೆರಿಗೆ) ಪದ್ಧತಿ ಜಾರಿಗೆ ತಂದನು
ಕಲ್ಲಿಕೋಟೆ,ಕೊಚ್ಚಿನ್,ಕಣ್ಣಾನೂರುಗಳಲ್ಲಿ ವ್ಯಾಪಾರ ವಸಾಹತುಗಳನ್ನು ಸ್ಥಾಪಿಸಿದ.
ಇವರ ಮೊದಲ ವಸಾಹತು ಮತ್ತು ಮೊದಲ ರಾಜಧಾನಿ ಕೊಚ್ಚಿನ್ .
![]() |
| ಕೊಚ್ಚಿನ್ |
ಬ್ರೆಜಿಲ್ ದೇಶವನ್ನು ಕಂಡುಹಿಡಿದ.
ಕೊಚ್ಚಿಯ ರಾಜನ ಸಹಾಯದಿಂದ ಜಾಮೊರಿನ್ ಮತ್ತು ಅರಬ್ಬರನ್ನು ನಿಯಂತ್ರಿಸಿದ.
ಫ್ರಾನ್ಸಿಸ್ ಡಿ ಅಲ್ಮೇಡ (೧೫೦೩-೧೫೦೯):
ಭಾರತಕ್ಕೆ ಬಂದ ಪೋರ್ಚುಗೀಸರ ಮೊದಲ ರಾಜ ಪ್ರತಿನಿಧಿ
ಈತನು ನೀಲಿ ಜಲ ನೀತಿ( ಬ್ಲೂ ವಾಟರ್ ಪಾಲಿಸಿ)
"ನಾವು ಸಮುದ್ರಗಳಲ್ಲಿ ಪ್ರಬಲವಾಗಿದ್ದಾರೆ ಮಾತ್ರ ಭಾರತದಲ್ಲಿ ಸ್ಥಿರತೆಯನ್ನು ಪಡೆಯುತ್ತೇವೆ"ಎಂದು ನಂಬಿದ್ದ.
ಕಲ್ಲಿಕೋಟೆಯ ದೊರೆ ಮತ್ತು ಈಜಿಪ್ಟ್ ದೊರೆಯನ್ನು"ನೌಕಾ" ಕದನದಲ್ಲಿ ಸೋಲಿಸಿ ಹಿಂದೂ ಮಹಾಸಾಗರದ ಮೇಲೆ ಒಡೆತನ ಸಾಧಿಸಿದ.
ಈತ ಪರ್ಷಿಯಾ ಕುದುರೆಗಳನ್ನು ಭಾರತಕ್ಕೆ ಪೂರೈಸುವ ವ್ಯಾಪಾರ ಗುತ್ತಿಗೆಯನ್ನು ಪಡೆದಿದ್ದ, ಆದ್ದರಿಂದಲೇ ವಿಜಯನಗರದ ಅರಸರ ಸಂಪರ್ಕ ಸಾಧಿಸಿದ್ದ.
೧೫೦೮ ರಲ್ಲಿ ಜಾಮೋರಿನ್ ನನ್ನು ಸೋಲಿಸಿ ಹಿಂದೂ ಮಹಾಸಾಗರದಲ್ಲಿ ಪೋರ್ಚುಗೀಸರ ಪ್ರಭಾವ ಹೆಚ್ಚಿಸಿದ.
೧೫೦೯ ರಲ್ಲಿ ಈಜಿಪ್ಟ್ ನಾವಿಕನಿಂದ ಕೊಲೆಯಾದ.
ಈಗ ಬರುವವನೆ ಪೋರ್ಚುಗೀಸರ ೨ ನೇ ವೈಸ್ರಾಯ್ ಅಥವಾ 2 ನೇ ರಾಜ ಪ್ರತಿನಿಧಿ ಅಲ್ಫ್ರಾನ್ಸೋ ಡಿ ಅಲ್ಬುಕರ್ಕ್(೧೫೦೯-೧೫೧೫):
ಪ್ರಸಿದ್ಧ ವೈಸರಾಯ್.
ಪೋರ್ಚುಗೀಸರ ನಿಜವಾದ ಸ್ಥಾಪಕ.
ವ್ಯಾಪಾರ ವೃದ್ಧಿಗಾಗಿ ವಸಾಹತುಗಳ ಸಂಖ್ಯೆಯನ್ನು ಹೆಚ್ಚಿಸುವುದು. ಸ್ಥಳೀಯರೊಂದಿಗೆ ವೈವಾಹಿಕ ಸಂಬಂಧ ಏರ್ಪಡಿಸಿ ಕೋಟೆಗಳನ್ನು ನಿರ್ಮಾಣ ಮಾಡುವುದು ಇವನ ಉದ್ದೇಶವಾಗಿತ್ತು.
ಈತನು ವಿಜಯನಗರ ಅರಸರಾದ ಶ್ರೀ ಕೃಷ್ಣದೇವರಾಯರೊಡನೆ ಉತ್ತಮ ರಾಜಕೀಯ ಮತ್ತು ಆರ್ಥಿಕ ಸಂಬಂಧ ಹೊಂದಿದ್ದನು.
ಆದ್ದರಿಂದ ಈತನು ಇವರ ಸಹಾಯದೊಂದಿಗೆ ಬಿಜಾಪುರದ ಸುಲ್ತಾನ ಯೂಸೂಫ್ ಆದಿಲ್ ಶಾಹಿಯ ಒಡೆತನದಲ್ಲಿದ್ದ ಗೋವಾವನ್ನು ವಶಪಡಿಸಿಕೊಂಡ. ಆಂಧ್ರಪ್ರದೇಶದ ಕೋವಿಲಕೊಂಡ ಎಂಬಲ್ಲಿ ಯುದ್ಧ ನಡೆಯಿತು.
ನಂತರ ೧೫೩೦ ರಲ್ಲಿ ಗೋವಾ ಪೋರ್ಚುಗೀಸರ ರಾಜಧಾನಿಯಾಯಿತು.
೧೫೧೧ ರಲ್ಲಿ ವ್ಯಾಪಾರಕ್ಕೆ ಆಯಕಟ್ಟಿನ ಸ್ಥಳವಾದ ಮಲೇಷ್ಯಾ ವನ್ನು ವಶಪಡಿಸಿಕೊಂಡ.
ಶ್ರೀ ಲಂಕಾ, ಅಂಜು ದೀವ್, ದಿಯು ದಮನ್,ಕಲ್ಲಿಕೋಟೆ, ಕೊಚ್ಚಿನ್ ಮುಂತಾದ ಕಡೆ ವ್ಯಾಪಾರ ವಸಾಹತುಗಳನ್ನು ಸ್ಥಾಪಿಸಿದನು.
ಇವನ ನಂತರ ದಕ್ಷ ಅಧಿಕಾರಿಗಳು ಯಾರು ಬರಲಿಲ್ಲ.
ಈತನ ಕೆಲವು ನೀತಿಗಳು:
೧. ಪೋರ್ಚುಗೀಸರಿಗೆ ಭಾರತದ ಮಹಿಳೆಯರನ್ನು ವಿವಾಹವಾಗಲು ಪ್ರೋತ್ಸಾಹಿಸಿದ.
೨. ಸತಿ ಪದ್ಧತಿ, ಶಿಶು ಹತ್ಯೆ, ಪರದಾ ಪದ್ಧತಿ ವಿರೋಧಿಸಿದ.
ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸಿದ.
೩. ಈ ನೀತಿಗಳಿಂದ ಭಾರತದ ಹಿಂದೂ ಮತ್ತು ಮುಸ್ಲಿಂ ದೊರೆಗಳಿಂದ ವಿವಾದಕ್ಕೆ ಒಳಗಾದ.
ನೀನೊಡಿ ಕುನ್ಹಾ (1529-1538)
ತಮಿಳುನಾಡಿನಲ್ಲಿ "ಸ್ಯಾಂಟೋ–ನೀ–ಕೋಟೆ" ಕಟ್ಟಿಸಿದ.
ಮಾರ್ಟಿನ್ ಅಲ್ಫಾನ್ಸೊ–ಡಿ –ಅಲ್ಬುಕರ್ಕ್:
ಈತನ ಕಾಲದಲ್ಲಿ ವೀರವನಿತೆ ಉಳ್ಳಾಲದ ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರ ವಿರುದ್ಧ ಹೋರಾಡಿದಳು.
ಚೆನ್ನಭೈರಾದೇವಿ:
ಬಿರುದು – ಕಾಳುಮೆಣಸಿನ ರಾಣಿ
೧೫೫೨–೧೬೦೬ ವರೆಗೆ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ "ನಗಿರೆ" ರಾಜ್ಯವನ್ನು ಆಳಿದರು.
ಪೋರ್ಚುಗೀಸರ ವಿರುದ್ಧ ದಂಗೆ ಎದ್ದ ಮೊದಲ "ವೀರವನಿತೆ” .








ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ