ಶನಿವಾರ, ಜನವರಿ 31, 2026

ಇಸ್ರೋ ಸ್ವದೇಶಿ ತಂತ್ರಜ್ಞಾನ: ಭಾರತ ಹೇಗೆ ಅಂತರಿಕ್ಷದಲ್ಲಿ ಆತ್ಮನಿರ್ಭರವಾಗುತ್ತಿದೆ?

 ಇಸ್ರೋ (ISRO) :

ಇಸ್ರೋ ಎಂದರೆ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದರ ಪೂರ್ಣ ಹೆಸರು Indian Space Research Organisation. ಇದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಾಗಿದೆ.

ಇಸ್ರೋ ದ ಧ್ಯೇಯ ವಾಕ್ಯ"Space Technology in the Service of Human Kind"

✳️ ಸ್ಥಾಪನೆ ಮತ್ತು ಮುಖ್ಯ ಕಚೇರಿ:

▶️1969 ಆಗಸ್ಟ್ 15 ರಂದು  ಸ್ಥಾಪನೆಯಾಯಿತು.

▶️ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಇದೆ.

▶️ಉಪಗ್ರಹ ಉಡಾವಣಾ ಕೇಂದ್ರ – ಶ್ರೀ ಹರಿಕೋಟ( ಆಂಧ್ರಪ್ರದೇಶ). ಇದು ಪೂರ್ವ ಕರಾವಳಿಯಲ್ಲಿ ಇದೆ.

▶️ರಾಕೆಟ್ ಪರೀಕ್ಷಾ ಕೇಂದ್ರ – ಕೇರಳದ ತಿರುವನಂತಪುರದಲ್ಲಿರುವ ತುಂಬಾ ದಲ್ಲಿದೆ.

▶️ಇಸ್ರೋ ದ ನಿಯಂತ್ರಣ ಘಟಕಗಳು – ಹಾಸನ ಮತ್ತು ಭೂಪಾಲ್.

▶️ಭಾರತದ ಅಂತರಿಕ್ಷ ಕಾರ್ಯಕ್ರಮಕ್ಕೆ ದಿಕ್ಕು ನೀಡಿದ ಪ್ರಮುಖ ವ್ಯಕ್ತಿ Vikram Sarabhai.

✳️ ಇಸ್ರೋದ ಮುಖ್ಯ ಉದ್ದೇಶಗಳು

▶️ಉಪಗ್ರಹಗಳನ್ನು ನಿರ್ಮಿಸಿ ಮತ್ತು ಉಡಾವಣೆ ಮಾಡುವುದು.

▶️ದೂರಸಂಪರ್ಕ, ಹವಾಮಾನ, ಕೃಷಿ, ವಿಪತ್ತು ನಿರ್ವಹಣೆಗಾಗಿ ಉಪಗ್ರಹ ಸೇವೆ ನೀಡುವುದು.

▶️ಚಂದ್ರ, ಮಂಗಳ ಹಾಗೂ ಇತರ ಗ್ರಹಗಳ ಅನ್ವೇಷಣೆ.

▶️ಸ್ವದೇಶಿ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿ.

✳️ ಪ್ರಮುಖ ರಾಕೆಟ್‌ಗಳು

▶️Polar Satellite Launch Vehicle (PSLV) – ವಿಶ್ವಾಸಾರ್ಹ ಮತ್ತು ಹೆಚ್ಚು ಬಳಕೆಯ ರಾಕೆಟ್

▶️GSLV – ಭಾರವಾದ ಉಪಗ್ರಹಗಳನ್ನು ಹೊತ್ತೊಯ್ಯಲು

✳️ ಪ್ರಸಿದ್ಧ ಮಿಷನ್‌ಗಳು

೧. Chandrayaan-3: 

▶️ಚಂದ್ರನ ದಕ್ಷಿಣ ಧ್ರುವದ ಸಮೀಪ ಯಶಸ್ವಿಯಾಗಿ ಲ್ಯಾಂಡ್ ಮಾಡಿದ ವಿಶ್ವದ ಮೊದಲ ದೇಶ ಭಾರತ.

೨. ಮಂಗಳಯಾನ (Mars Orbiter Mission):

▶️ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹದ ಕಕ್ಷೆಗೆ ಸೇರಿದ ಸಾಧನೆ.

೩. ಆದಿತ್ಯ-L1:

▶️ಸೂರ್ಯ ಅಧ್ಯಯನಕ್ಕಾಗಿ ಕಳುಹಿಸಿದ ಮಿಷನ್.

▶️ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆ

೪. Gaganyaan:

▶️ಭಾರತೀಯ ಅಂತರಿಕ್ಷಯಾತ್ರಿಗಳನ್ನು (ಮಾನವರನ್ನು) ಅಂತರಿಕ್ಷಕ್ಕೆ ಕಳುಹಿಸುವ ಯೋಜನೆ.

✳️ ಇಸ್ರೋನ ವಿಶೇಷತೆಗಳು

▶️ಕಡಿಮೆ ವೆಚ್ಚದಲ್ಲಿ ಹೆಚ್ಚು ಫಲಿತಾಂಶ ನೀಡುವ ತಂತ್ರಜ್ಞಾನ

ಸ್ವದೇಶಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ.

▶️ವಿಶ್ವದ ಅನೇಕ ದೇಶಗಳಿಗೆ ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವಾಸ ಗಳಿಸಿದೆ.

ಇಸ್ರೋ ದ ಇತ್ತೀಚೀನ ಬೆಳವಣಿಗೆಗಳು:

೧. SPADEX – ಅಂತರಿಕ್ಷದಲ್ಲೇ ಡಾಕಿಂಗ್ ತಂತ್ರಜ್ಞಾನ:

▶️ಇಸ್ರೋ ಎರಡು ಉಪಗ್ರಹಗಳನ್ನು ಅಂತರಿಕ್ಷದಲ್ಲೇ ಸ್ವಯಂಚಾಲಿತವಾಗಿ ಜೋಡಿಸುವ (docking) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.

▶️ಇದು ಭವಿಷ್ಯದಲ್ಲಿ

ಅಂತರಿಕ್ಷ ನಿಲ್ದಾಣ ನಿರ್ಮಾಣ

ಉಪಗ್ರಹ ದುರಸ್ತಿ

ಹಾಗೂ ಇಂಧನ/ವಿದ್ಯುತ್ ವರ್ಗಾವಣೆ ಮಾಡುವ ತಂತ್ರಜ್ಞಾನಕ್ಕೆ ಬಹಳ ಮುಖ್ಯ ಹೆಜ್ಜೆ.

೨. ಸ್ವದೇಶಿ ಸ್ಪೇಸ್ ಗ್ರೇಡ್ ಮೈಕ್ರೊಪ್ರೊಸೆಸರ್:

▶️ಇಸ್ರೋ ಭಾರತದಲ್ಲೇ ಅಭಿವೃದ್ಧಿಪಡಿಸಿದ ಹೊಸ 32-bit space-grade ಪ್ರೊಸೆಸರ್ ಬಳಸುತ್ತಿದೆ.

▶️ಇದರಿಂದ ರಾಕೆಟ್ ಮತ್ತು ಉಪಗ್ರಹಗಳ ಕಂಪ್ಯೂಟರ್ ವ್ಯವಸ್ಥೆಯಲ್ಲಿ ವಿದೇಶಿ ಅವಲಂಬನೆ ಕಡಿಮೆಯಾಗುತ್ತದೆ.

೩. ಎಲೆಕ್ಟ್ರಿಕ್ ಪ್ರೊಪಲ್ಷನ್ ಮತ್ತು ಕ್ವಾಂಟಂ ಸಂವಹನ ಪರೀಕ್ಷೆಗಳು:

▶️ಹೊಸ ತಂತ್ರಜ್ಞಾನ ಉಪಗ್ರಹಗಳಲ್ಲಿ

ವಿದ್ಯುತ್ ಚಾಲಿತ thruster

ಅತ್ಯಂತ ನಿಖರವಾದ ಅಣು ಗಡಿಯಾರ

ಕ್ವಾಂಟಂ ಕಮ್ಯೂನಿಕೇಶನ್ payload

ಹಾಗು ಇತರೆ ಸುಧಾರಿತ ಉಪಕರಣಗಳನ್ನು ಪರೀಕ್ಷಿಸಲಾಗುತ್ತಿದೆ.

೪. ಭೂಮಿಯ ನಿಖರ ನಿಗಾವಹಣೆಗಾಗಿ NISAR ಉಪಗ್ರಹ:

▶️ಇದು ಇಸ್ರೋ ಮತ್ತು NASA ಸಂಯುಕ್ತ ಯೋಜನೆ.

ಡ್ಯುಯಲ್ ರಾಡಾರ್ ತಂತ್ರಜ್ಞಾನ ಬಳಸಿ

ಭೂಕಂಪ, ಹಿಮಪರ್ವತಗಳ ಬದಲಾವಣೆ

ಅರಣ್ಯ ಮತ್ತು ಕೃಷಿ ಭೂಮಿಯ ಸ್ಥಿತಿ

ಇವುಗಳನ್ನು ಅತ್ಯಂತ ನಿಖರವಾಗಿ ಗಮನಿಸುತ್ತದೆ.

೫. ಮಾನವ ಅಂತರಿಕ್ಷಯಾನಕ್ಕೆ ಮುಂದುವರೆದ ಪರೀಕ್ಷೆಗಳು:

▶️ಗಗನಯಾನ ಯೋಜನೆಗಾಗಿ ಕ್ರೂ ಎಸ್ಕೇಪ್ ಸಿಸ್ಟಮ್ ಟೆಸ್ಟ್ಕ್ಯಾಪ್ಸೂಲ್ ಸುರಕ್ಷತಾ ಪರೀಕ್ಷೆಗಳು 

ನಿರಂತರವಾಗಿ ನಡೆಯುತ್ತಿವೆ.

೬. ಹೊಸ ಉಡಾವಣೆ ಸೌಕರ್ಯಗಳು:

▶️ಭಾರತದಲ್ಲಿ ಮೂರನೇ ಲಾಂಚ್ ಪ್ಯಾಡ್ ನಿರ್ಮಾಣದ ಯೋಜನೆ ರೂಪಿಸಲಾಗುತ್ತಿದೆ, ಇದರಿಂದ ಹೆಚ್ಚು ಸಂಖ್ಯೆಯಲ್ಲಿ ರಾಕೆಟ್ ಉಡಾವಣೆ ಮಾಡಲು ಸಾಧ್ಯವಾಗುತ್ತದೆ.

✳️ ದೇಶಕ್ಕೆ ಇಸ್ರೋನ ಉಪಯೋಗ:

▶️ಟಿವಿ ಮತ್ತು ಮೊಬೈಲ್ ಸಂಪರ್ಕ.

▶️ಹವಾಮಾನ ಮುನ್ಸೂಚನೆ.

▶️ಜಿಪಿಎಸ್ ಸಮಾನ ನ್ಯಾವಿಗೇಶನ್ (NavIC).

▶️ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿಗಾವಹಣೆ .


ಇಸ್ರೋ ಭಾರತವನ್ನು ಅಂತರಿಕ್ಷ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿಯ ರಾಷ್ಟ್ರಗಳಲ್ಲಿ ಒಂದಾಗಿ ಮಾಡಿರುವ ಹೆಮ್ಮೆಗೈದ ಸಂಸ್ಥೆಯಾಗಿದೆ. 🚀.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕದಲ್ಲಿ 1.11 ಕೋಟಿ ಮತದಾರರ ಹೆಸರು ಡಿಲೀಟ್ ಆಗಿದೆಯೇ? ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ 1.11 ಕೋಟಿ ಮತದಾರರ ಹೆಸರು ಡಿಲೀಟ್ ಆಗಿದೆಯೇ? ಸಂಪೂರ್ಣ ಮಾಹಿತಿ. ಕರ್ನಾಟಕದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ “1.11 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ...