ಫ್ರೆಂಚರು:
![]() |
| ಫ್ರಾನ್ಸ್ ದೇಶದ ರಾಜಧಾನಿ "ಪ್ಯಾರಿಸ್" |
* ಫ್ರೆಂಚರು ಭಾರತಕ್ಕೆ ಬಂದಿರುವ
ಯುರೋಪಿಯನ್ನರಲ್ಲಿ ೫ನೇ ಸ್ಥಾನ ಪಡೆದಿದ್ದಾರೆ ಮತ್ತು ಇವರೇ ಕೊನೆಯದಾಗಿ ಬಂದ ಬಂದ ಯುರೋಪಿಯನ್ನರು.
* ಇವರು ಮೂಲತಃ ಫ್ರಾನ್ಸ್ ದೇಶದವರು. ಇದರ ರಾಜಧಾನಿ ಪ್ಯಾರಿಸ್.
* ಫ್ರಾನ್ಸ್ ದೊರೆ ೧೪ ನೇ ಲೂಯಿ ಮತ್ತು ಅರ್ಥಸಚಿವರಾದ ಕೊಲ್ಬರ್ಟ್ ರ ಪ್ರಯತ್ನದಿಂದ ೧೬೬೪ ರಲ್ಲಿ "ಫ್ರೆಂಚ್ ಈಸ್ಟ್ ಇಂಡಿಯಾ" ಕಂಪನಿ ಸ್ಥಾಪಿಸಲಾಯಿತು.
ಇದು ಖಾಸಗಿ ಕಂಪನಿಯಾಗಿರದೆ ಸರ್ಕಾರವೇ ಸ್ಥಾಪಿಸಿದ ಒಂದು ಇಲಾಖೆಯಾಗಿತ್ತು.* ಕ್ರಿಸ್ತ ಶಕ ೧೬೬೭ ರಲ್ಲಿ ಮೊದಲ ಗವರ್ನರ್ ಜನರಲ್ ಆದ "ಫ್ರಾಂಕೋಯಿಸ್ ಕೆರಾನ್" ಭಾರತಕ್ಕೆ ಮೊದಲು ಬಂದ ವ್ಯಕ್ತಿ. ಆದರೆ ೧೬೫೮ ರಲ್ಲಿ "ಫ್ರಾಂಕೋಯಿಸ್ ಬರ್ನಿಯರ್" ಎಂಬ ಫಿಸಿಷಿಯನ್, ಟ್ರಾವೆಲರ್ ಆದ ಈತನು ಔರಂಗಜೇಬನ ಆಸ್ಥಾನಕ್ಕೆ ಬಂದಿದ್ದನು.
* ಇವರು ಭಾರತಕ್ಕೆ ಬಂದಾಗ ಇದ್ದಂತಹ ಮೊಘಲ್ ದೊರೆ ಔರಂಗಜೇಬ್ .
![]() |
| ಔರಂಗಜೇಬ್ |
* ಕ್ರಿಸ್ತ ಶಕ ೧೬೬೯ ರಲ್ಲಿ ಮಚಲಿಪಟ್ಟಣದಲ್ಲಿ ವಸಾಹತು ಸ್ಥಾಪಿಸಲಾಯಿತು.
![]() |
| ಮೊದಲ ವಸಾಹತು ಕೇಂದ್ರವಾದ "ಮಚಲಿಪಟ್ಟಣದ" ದೃಶ್ಯ |
* ಕ್ರಿಸ್ತ ಶಕ ೧೬೭೪ ರಲ್ಲಿ ಈತನು ವಾಲಿಕಂದಪುರಂ ಬಳಿ ಇರುವ ಒಂದು ಹಳ್ಳಿಯನ್ನು ಪಡೆದು ಅದನ್ನು ಅಭಿವೃದ್ಧಿಪಡಿಸಿದ ನಂತರ ಇದೇ ಪ್ರದೇಶ ಮುಂದೆ "ಪಾಂಡಿಚೇರಿ" ಎಂದಾಯಿತು. ಇದಲ್ಲದೆ ಫ್ರೆಂಚರ ರಾಜಧಾನಿ ಕೇಂದ್ರವು ಆಯಿತು.
![]() |
| ಪಾಂಡಿಚೇರಿ 1674 ರಲ್ಲಿ ಸ್ಥಾಪನೆ |
* ಕ್ರಿಸ್ತ ಶಕ ೧೬೯೩ ರಲ್ಲಿ ಡಚ್ಚರ ಮತ್ತು ಫ್ರೆಂಚರ ಮಧ್ಯದ ಹೋರಾಟದಲ್ಲಿ ಪಾಂಡಿಚೇರಿ ಡಚ್ಚರ ವಶವಾಯಿತು. ಆದರೆ "ರಿಶ್ವಿಕ್" ಒಪ್ಪಂದದಂತೆ ಅದನ್ನು ಫ್ರೆಂಚರಿಗೆ ಹಿಂದಿರುಗಿಸಲಾಯಿತು.
* ಕ್ರಿಸ್ತ ಶಕ ೧೭೩೯ ರಲ್ಲಿ ಗವರ್ನರ್ ಆಗಿ ಬಂದ "ಡೂಮ್" ಮೊಘಲರಿಂದ ನಾಣ್ಯ ಟಂಕಿಸುವ ಅನುಮತಿಯನ್ನು ಪಡೆದನು.
❇️ ಡೂಪ್ಲೆ:
* ಕ್ರಿಸ್ತ ಶಕ ೧೭೪೨ ರಲ್ಲಿ ಚಂದ್ರನಾಗೋರ್ ಗವರ್ನರ್ ಆಗಿದ್ದ ಡೂಪ್ಲೆ, ಪಾಂಡಿಚೇರಿ ಗವರ್ನರ್ ಆಗಿ ಬಂದನು.
* ಈತನನ್ನು ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯದ ಧ್ರುವತಾರೆ, ಉಷಾತಾರೆ, ಮಿನುಗುವ ನಕ್ಷತ್ರ ಎಂದು ಕರೆದಿದ್ದಾರೆ.
* ಈತ ಬರುವಾಗ ತನ್ನ ಜೊತೇಲೆ ನೌಕಾಪಡೆಯನ್ನು ತಂದನು.
* ಸಹಾಯಕ ಸೈನ್ಯ ಪದ್ಧತಿಯ ಮೊದಲ ಪರಿಕಲ್ಪನೆಯನ್ನು ನೀಡಿದವನು ಈತನೇ.
* ಈತನು ಬ್ರಿಟಿಷರೊಂದಿಗೆ ಯುದ್ಧ ಮಾಡಿ ಅಪಾರ ಲಾಭ ಮತ್ತು ನಷ್ಟವನ್ನು ಗಳಿಸಿದ.
* ಉತ್ಸಾಹಿ, ಮಹತ್ವಾಕಾಂಕ್ಷಿಯಾದ ಡೂಪ್ಲೆ ರಾಜ್ಯ ವಿಸ್ತರಣೆಗೆ ಮುಂದಾದನು.
ಇದರಿಂದಾಗಿ ಬ್ರಿಟೀಷರ ಮತ್ತು ಫ್ರೆಂಚರ ಮಧ್ಯೆ ಯುದ್ಧಗಳು ಆರಂಭವಾದವು, ಅವೇ "ಕಾರ್ನಾಟಿಕ್ ಯುದ್ಧಗಳು" .
✳️ ವ್ಯಾಪಾರ ಕೇಂದ್ರಗಳು:
ಪೂರ್ವದಲ್ಲಿ:
▶️ ಚಂದ್ರನಾಗೋರ್.
▶️ ಬಾಲಸೂರು.
✳️ ಪಶ್ಚಿಮದಲ್ಲಿ:
▶️ ಯಾನಂ.
▶️ಪಾಂಡಿಚೇರಿ.
▶️ ಮಾಹೆ.
ಫ್ರೆಂಚರು ಭಾರತಕ್ಕೆ ಬಂದ ಕೊನೆಯ ಯುರೋಪಿಯನ್ನರಾಗಿದ್ದು, 1664ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದರು. ಫ್ರಾಂಕೋಯಿಸ್ ಕೆರಾನ್ ಮತ್ತು ಫ್ರಾಂಕೋಯಿಸ್ ಮಾರ್ಟಿನ್ ಅವರ ನೇತೃತ್ವದಲ್ಲಿ ಸೂರತ್, ಮಚಲಿಪಟ್ಟಣ ಮತ್ತು ಪಾಂಡಿಚೇರಿಯಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಪಾಂಡಿಚೇರಿ ಫ್ರೆಂಚರ ಪ್ರಮುಖ ಆಡಳಿತ ಕೇಂದ್ರವಾಯಿತು. ಡಚ್ಚರೊಂದಿಗೆ ನಡೆದ ಯುದ್ಧದ ನಂತರವೂ ಫ್ರೆಂಚರು ತಮ್ಮ ಪ್ರಭಾವವನ್ನು ಉಳಿಸಿಕೊಂಡರು. ಗವರ್ನರ್ ಡೂಪ್ಲೆ ಕಾಲದಲ್ಲಿ ಫ್ರೆಂಚರು ರಾಜಕೀಯ ಹಾಗೂ ಸೈನಿಕ ಶಕ್ತಿಯನ್ನು ವಿಸ್ತರಿಸಲು ಪ್ರಯತ್ನಿಸಿದರು. ಆದರೆ ಬ್ರಿಟಿಷರೊಂದಿಗೆ ನಡೆದ ಸಂಘರ್ಷಗಳಿಂದ ಭಾರತದಲ್ಲಿ ಫ್ರೆಂಚರ ಪ್ರಭಾವ ಕ್ರಮೇಣ ಕುಸಿಯಿತು.







ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ